ಗೂಗಲ್ ನಕ್ಷೆಯಲ್ಲಿ 'ಭಾರತ' ದ ಭೂಪಟ
ಗೂಗಲ್ ಮ್ಯಾಪ್‍ನಲ್ಲಿ ಸರ್ಚ್ ಮಾಡುವಾಗ ಭಾರತ ಎಂದು ಹುಡುಕಿದರೆ ಭಾರತದ ತ್ರಿವರ್ಣ ಧ್ವಜ ಮತ್ತು ಡಿಜಿಟಲ್ ಕೋಡ್‍ನೊಂದಿಗೆ ದಕ್ಷಿಣ ಏಷ್ಯಾದ ದೇಶ ಎಂದು ತೋರಿಸುತ್ತಿದೆ. ಇಂಡಿಯಾ ಮತ್ತು ಭಾರತ ಎರಡನ್ನು ದಕ್ಷಿಣ ಏಷ್ಯಾದ ದೇಶ ಎಂದು ಪರಿಗಣಿಸಲಾಗಿದ್ದು, ಹಿಂದಿಯಲ್ಲಿ ಭಾರತ ಎಂದೂ ಅಥವಾ ಇಂಗ್ಲೀಷ್‍ನಲ್ಲಿ ಇಂಡಿಯಾ ಎಂದು ಹುಡುಕಾಟ ನಡೆಸಿದರೆ ಭಾರತದ ಭೂಪಟ ಕಾಣಸಿಗಲಿದೆ. ಗೂಗಲ್ ತನ್ನ ಹುಡುಕಾಟದ ಮ್ಯಾಪ್‍ನಲ್ಲಿ ಮಾತ್ರವಲ್ಲ ಭಾಷಾಂತರ, ಸುದ್ದಿ ಸೇರಿ ಎಲ್ಲ ಉತ್ಪನ್ನಗಳಲ್ಲೂ ಇದೇ ರೀತಿ ನವೀಕರಣಗೊಳಿಸಿದೆ. ಆದರೆ ಈ ಬದಲಾವಣೆಯನ್ನು ಗೂಗಲ್ ಇನ್ನು ಅಧೀಕೃತವಾಗಿ ದೃಢೀಕರಿಸಿಲ್ಲವಾದರೂ ಇದು ಹುಡುಕಾಟ ಫಲಿತಾಂಶಗಳಲ್ಲಿ ತೋರಿಸುತ್ತಿದೆ. ಕೇಂದ್ರ ಸರಕಾರವು ಅಧಿಕೃತವಾಗಿ ಇಂಡಿಯಾದ ಬದಲಿಗೆ ಭಾರತ ಎಂದು ಬಳಸುತ್ತಿರುವ ಸಂದರ್ಭದಲ್ಲಿ ಗೂಗಲ್‍ನಲ್ಲಿ ಈ ಬದಲಾವಣೆ ಮಾಡಲಾಗಿದೆ.
Comments
Post a Comment